Dr Salma Reehana

GP

ಲಸಿಕೆಗಳನ್ನು ಸುರಕ್ಷಿತವಾಗಿ ತಯಾರಿಸಲಾಗಿದೆ

ಒಂದು ಸ್ವತಂತ್ರ ಸಂಸ್ಥೆಯಾದ ʼಔಷಧಗಳು ಮತ್ತು ಆರೋಗ್ಯ ಆರೈಕೆ ಉತ್ಪನ್ನಗಳ ವಿನಿಯಾಮಕ ಸಂಸ್ಥೆ (MHRA)ʼ ಯಿಂದ ನಿರ್ದಿಷ್ಟಪಡಿಸಲಾದ ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕತೆಯ ಕಟ್ಟುನಿಟ್ಟಿನ ಮಾನಕಗಳನ್ನು ಪೂರೈಸುತ್ತಾ ಕೊವಿಡ್-19 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು NHS ನಮಗೆ ತಿಳಿಸುತ್ತದೆ.
 
ಅನುಮೋದಿಸಲ್ಪಡುವ ಯಾವುದೇ ಕೊರೊನಾವೈರಸ್‌ ಲಸಿಕೆಯು ಇತರ ಎಲ್ಲ ಪರವಾನಗಿ ಪಡೆದ ಔಷಧಗಳು ಹಾದುಹೋಗುವ ಎಲ್ಲ ಚಿಕಿತ್ಸಾತ್ಮಕ ಪ್ರಯೋಗಗಳು ಹಾಗೂ ಸುರಕ್ಷತಾ ತಪಾಸಣೆಗಳನ್ನು ಹಾದು ಹೋಗಬೇಕು.
 
ಅಂತರಾಷ್ಟ್ರೀಯ ಸುರಕ್ಷತಾ ಮಾನಕಗಳನ್ನು MHRA ಅನುಸರಿಸುತ್ತದೆ.
 
ಹಿಂದೆಂದಿಗೂ ಕಂಡುಬರದಂತಹ ಜಾಗತಿಕ ವೈಜ್ಞಾನಿಕ ಸಮುದಾಯದ ಸಹಯೋಗ, ಸಮಾನಾಂತರ ಅಭಿವೃದ್ಧಿ ಪಥಗಳು ಮತ್ತು ಹೆಚ್ಚಿನ ಪ್ರಮಾಣದ ನಿಧಿ ಲಭ್ಯತೆಯ ಕಾರಣಗಳಿಂದಾಗಿ ಲಸಿಕೆಗಳನ್ನು ತಯಾರಿಸಲು ತಗುಲುವ ದೀರ್ಘ ಕಾಲಾವಕಾಶಗಳನ್ನು ತಪ್ಪಿಸಲಾಗಿದೆ.
 
ಬಿಳಿಯರು, ಕರಿಯರು, ಏಷ್ಯನ್ನರು ಮತ್ತು ಸಮ್ಮಿಶ್ರ ಅಲ್ಪಸಂಖ್ಯಾತ ಜನಾಂಗೀಯ ಸಮೂಹಗಳನ್ನೂ ಒಳಗೊಂಡಂತೆ ಹಲವಾರು ರಾಷ್ಟ್ರೀಯತೆಗಳು ಮತ್ತು ಜೀವನದ ಎಲ್ಲ ಕವಲುಗಳಿಂದ ಬಂದಂಥ ಜನರು ಕೊವಿಡ್-19 ಲಸಿಕೆ ಪ್ರಯೋಗಗಳ ಭಾಗವಾಗಿದ್ದರು.

ಕೊವಿಡ್-19 ಲಸಿಕೆಯ ಪಾರ್ಶ್ವ ಪರಿಣಾಮಗಳು

ಎಲ್ಲ ಲಸಿಕೆಗಳಂತೆಯೇ ಕೊವಿಡ್‌-19 ಲಸಿಕೆಯೂ ಸಹ ಪಾರ್ಶ್ವ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುವದಾದರೂ ಪ್ರತಿಯೊಬ್ಬರನ್ನೂ ಅವುಗಳು ಬಾಧಿಸುವುದಿಲ್ಲ. ಬಹುಪಾಲು ಪಾರ್ಶ್ವ ಪರಿಣಾಮಗಳು ಸೌಮ್ಯ ಅಥವಾ ಮಧ್ಯಮ ತೀವ್ರತೆಯ ಪರಿಣಾಮವನ್ನು ಹೊಂದಿದ್ದು, ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಹೊರಟುಹೋಗುತ್ತವೆ ಎಂದು MHRA ನಮಗೆ ತಿಳಿಸುತ್ತದೆ.
 
ಲಕ್ಷಾಂತರ ಜನರಿಗೆ ಲಸಿಕೆಗಳನ್ನು ನೀಡಲಾಗಿದ್ದು, ಅಲರ್ಜಿ ಪ್ರತಿಕ್ರಿಯೆಗಳಂತಹ ಗಂಭೀರ ಪಾರ್ಶ್ವ ಪರಿಣಾಮಗಳ ವರದಿಗಳು ತೀರಾ ವಿರಳವಾಗಿವೆ.
  
ಕೊವಿಡ್-19 ನಿಂದಾಗಿ ಉಂಟಾಗುವ ದೀರ್ಘಾವಧಿ ಸಂಕೀರ್ಣತೆಗಳು ಅಥವಾ ಮರಣದ ಅಪಾಯಗಳ ತುಲನೆಯಲ್ಲಿ, ಕನಿಷ್ಟ ಪ್ರಮಾಣದ ಅಥವಾ ಅಲ್ಪಾವಧಿ ಪಾರ್ಶ್ವ ಪರಿಣಾಮಗಳ ಚಿಕ್ಕ ಅಪಾಯವು ಕಡೆಗಣಿಸುವಂಥದ್ದಾಗಿರುತ್ತದೆ.

ಕೊವಿಡ್-19 ಲಸಿಕೆಯ ಘಟಕಾಂಶಗಳ ಬಗ್ಗೆ ಸ್ಪಷ್ಟನೆ

ಪ್ರಸ್ತುತ ಲಭ್ಯವಿರುವ ಲಸಿಕೆಗಳಲ್ಲಿ ಹಂದಿ ಅಥವಾ ಇತರ ಪ್ರಾಣಿ ಉತ್ಪನ್ನಗಳು ಇರುವುದಿಲ್ಲ.
 
ಆಕ್ಸ್‌ಫರ್ಡ್‌ ಅಸ್ಟ್ರಾ ಝೆನೆಕಾ ಲಸಿಕೆಯು ನೈಸರ್ಗಿಕ ಆಹಾರಗಳಲ್ಲಿ ಅಥವಾ ಬ್ರೆಡ್‌ನಲ್ಲಿ ಕಂಡುಬರುವುದಕ್ಕಿಂತಲೂ ಕಡಿಮೆ ಪ್ರಮಾಣದ ಇಥನಾಲ್‌ ಅನ್ನು ಒಳಗೊಂಡಿರುತ್ತದೆ. ಅಲ್ಕೊಹಾಲ್‌ನ ಈ ಪ್ರಮಾಣವು ನಿರ್ಲಕ್ಷಿಸಬಹುದಾದ ಪ್ರಮಾಣದಲ್ಲಿ ಇರುವುದರಿಂದ ಈ ಲಸಿಕೆಯನ್ನು ಅನುಮತಿಸಬಹುದು ಎಂದು ಮುಸ್ಲಿಮ್‌ ವಿದ್ವಾಂಸರು ಪರಿಗಣಿಸಿದ್ದಾರೆ.

ಲಸಿಕೆಗಳ ಬಗೆಗಿನ ಮಿಥ್ಯ ಸಂಗತಿಗಳು

ಲಸಿಕೆಯು:
 
ನಿಮ್ಮ ಡಿಎನ್‌ಎ ಅನ್ನು ಮಾರ್ಪಡಿಸುವುದಿಲ್ಲ .
 
ನಿಮಗೆ ಕೊರೊನಾವೈರಸ್‌ ಅನ್ನು ನೀಡುವುದಿಲ್ಲ .
 
ನಿಮ್ಮ ಮಕ್ಕಳನ್ನು ಉಂಟುಮಾಡುವ ಶಕ್ತಿಯ ಮೇಲೆ ಪ್ರಭಾವ ಬೀರುವದಿಲ್ಲ .
 
ಸರ್ವೇಕ್ಷಣೆಗಾಗಿ ಯಾವುದೇ ಚಿಪ್‌ ಅಥವಾ ಟ್ರ್ಯಾಕರ್‌ಗಳನ್ನು ಒಳಗೊಂಡಿರುವುದಿಲ್ಲ .

ಕೊವಿಡ್-19 ಲಸಿಕೆಗಳು ತುಂಬಾ ಪರಿಣಾಮಕಾರಿಯಾಗಿವೆ

ಸೋಂಕನ್ನು ನೀವು ತಗುಲಿಸಿಕೊಂಡಲ್ಲಿ, ಕೊವಿಡ್‌-19 ನಿಂದ ಬಳಲುವ ಅವಕಾಶವನ್ನು ಮತ್ತು ರೋಗಲಕ್ಷಣಗಳ ತೀವ್ರತೆಯನ್ನು ಈ ಲಸಿಕೆಯು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ .
 
ಲಸಿಕಾಕರಣವು ಕೆಲಸ ಮಾಡುವ ಧೃಢವಾದ ಸಾಕ್ಷ್ಯಾಧಾರದಿಂದಾಗಿ ನಮ್ಮ ಹಿರಿಯ ವಿಜ್ಞಾನಿಗಳು ಮತ್ತು ತಜ್ಞ ವೈದ್ಯರು ಅದನ್ನು ಶಿಫಾರಸ್ಸು ಮಾಡುತ್ತಾರೆ.
 
ಆದಾಗ್ಯೂ, 100% ಸಂರಕ್ಷಣೆಯನ್ನು ಇದು ನೀಡುವುದಿಲ್ಲ ಹಾಗಾಗಿ ಜನಸಂಖ್ಯೆಯ ಬಹುಪಾಲು ಜನರು ಲಸಿಕೆಯನ್ನು ಹಾಕಿಸಿಕೊಳ್ಳುವವರೆಗೆ ಕೈಗಳ ಉತ್ತಮ ಶುಚಿತ್ವವನ್ನು ಕಾಪಾಡುವುದನ್ನು, ಮಾಸ್ಕ್‌ ಹಾಕಿಕೊಳ್ಳುವುದನ್ನು ಮತ್ತು ಸಾಮಾಜಿಕ ಅಂತರ ಕಾಪಾಡುವದನ್ನು ಮುಂದುವರೆಸಬೇಕಿರುತ್ತದೆ.

ಇತರರನ್ನು ಸಂರಕ್ಷಿಸುವುದು

ಕೊವಿಡ್-19 ಲಸಿಕೆಯ ಹಾಕಿಸಿಕೊಳ್ಳುವಿಕೆಯು ನಿಮ್ಮನ್ನು, ನಿಮ್ಮ ಕುಟುಂಬವನ್ನು, ಸ್ನೇಹಿತರು ಮತ್ತು ಸಮುದಾಯವನ್ನು ರಕ್ಷಿಸುತ್ತದೆ.
 
65 ವರ್ಷಗಳಿಗೂ ಮೇಲ್ಪಟ್ಟ ವಯಸ್ಸಿನವರು ಕೊವಿಡ್‌ ಸೋಂಕಿಗೆ ಒಳಗಾದಲ್ಲಿ ಅವರು ಮರಣಿಸುವ ಸಾಧ್ಯತೆಯು 3 ಪಟ್ಟು ಹೆಚ್ಚಾಗಿರುತ್ತದೆ. ನೀವು ಕೊವಿಡ್-19 ಲಸಿಕೆಯನ್ನು ಹಾಕಿಸಿಕೊಳ್ಳದಿದ್ದು, ಅದರಿಂದ ಬಳಲಿದಲ್ಲಿ ಅಥವಾ ಬೇರಾರಿಗೋ ಅದರ ಸೋಂಕು ತಗುಲಲು ನೀವು ಕಾರಣರಾದಲ್ಲಿ ನಿಮಗೆ ಹೇಗೆ ಅನಿಸುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಿ.

ಸಾಮಾನ್ಯ ಸ್ಥಿತಿಗೆ ಮರಳುವುದು

ಕೊವಿಡ್-19 ಲಸಿಕೆಯ ಹಾಕಿಸಿಕೊಳ್ಳುವಿಕೆಯು ನಮ್ಮ ಜೀವನವು ಸಹಜ ಸ್ಥಿತಿಗೆ ಮರಳಲು ನಮಗೆ ನೆರವಾಗುತ್ತದೆ.
 
ಸಾಧ್ಯವಿರುವಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೆಚ್ಚಿನ ಮಟ್ಟದ ಪ್ರತಿರಕ್ಷಣೆಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಪುನಃ ಸಹಜ ಸ್ಥಿತಿಯತ್ತ ನಾವು ಸಾಗಬಹುದು.

ಕೊವಿಡ್-19 ಬಗೆಗಿನ ಮಿಥ್ಯ ಸಂಗತಿಗಳು

ಮಿಥ್ಯೆ: ‘ಕೊವಿಡ್-19 ಸಾಮಾನ್ಯ ಶೀತದಂಥ ಕಾಯಿಲೆಯಾಗಿದೆ, ಅದಕ್ಕಿಂತ ಕೆಟ್ಟದ್ದೇನಲ್ಲ’
ಸತ್ಯ: ಸಾಮಾನ್ಯ ಶೀತಕ್ಕಿಂತ ಕೊವಿಡ್‌ ಸೋಂಕಿನಿಂದ ನೀವು ಮರಣಿಸುವ ಸಾಧ್ಯತೆ 10 ಪಟ್ಟು ಹೆಚ್ಚಾಗಿರುತ್ತದೆ ಮತ್ತು 30 ದಿನಗಳು ಅಥವಾ ಅದಕ್ಕೂ ಹೆಚ್ಚಿನ ಕಾಲ ನೀವು ಅಸ್ವಸ್ಥರಾಗಬಹುದು.
 
ಮಿಥ್ಯೆ: ‘ಸಮುದಾಯ ಪ್ರತಿರಕ್ಷಣೆ ಬರುವವರೆಗೆ ನಾವು ಕಾಯಬೇಕು ಅಷ್ಟೇ.’
ಸತ್ಯ: ಇದು ಅಗಾಧ ಪ್ರಮಾಣದ ಸಾವುಗಳಿಗೆ ದಾರಿ ಮಾಡಿಕೊಡುತ್ತದೆ.

ನಿಮ್ಮ ಲಸಿಕಾಕರಣವು ಮಹತ್ವದ ವಿಷಯವಾಗಿದೆ

ಸಮುದಾಯ ಪ್ರತಿರಕ್ಷಣೆಯ ಸಾಧನೆಯಲ್ಲಿ ನೀವು ಪ್ರಮುಖರಾಗಿರುತ್ತೀರಿ, ಏಕೆಂದರೆ ಸುಮಾರು 80% ದಷ್ಟು ರಕ್ಷಣೆಯು ನಮಗೆ ಅಗತ್ಯವಾಗಿದೆ. ಈ ರಾಷ್ಟ್ರೀಯ ಪ್ರಯತ್ನದಲ್ಲಿ ತುಂಬಾ ಪ್ರಮುಖವಾದ ಪಾತ್ರವೊಂದನ್ನು ನೀವು ವಹಿಸಬೇಕಿದೆ – ನಿಮ್ಮ ಲಸಿಕಾಕರಣದೊಂದಿಗೆ ಮಾತ್ರ ಸಹಜ ಸ್ಥಿತಿಯು ನಿಮಗೆ ಮತ್ತು ಇತರರಿಗೆ ಹಿಂದಿರುಗಬಲ್ಲದು.

The information in this app is correct at the time of publication. To view the latest Government and NHS information on Covid-19 guidance, vaccines and side effects please click here to view a list of websites where you will be able to find out more information on specific topics.

ಲಸಿಕೆ ಹಾಕಿಸಿಕೊಳ್ಳುವುದನ್ನು ಆಯ್ಕೆ ಮಾಡಿಕೊಂಡಲ್ಲಿ, ನಿಮ್ಮ ಜೀವನವು ಉತ್ತಮವಾಗಿರುತ್ತದೆ